ಕನ್ನಡ - Kannada

Aviagen ಗೆ ಸುಸ್ವಾಗತ

Aviagen ಬ್ರಾಯ್ಲರ್ ಬ್ರೀಡರುಗಳು ಒಂದು ದಿನದ ಗ್ರಾಂಡ್ ಪೇರೆಂಟ್ ಮತ್ತು ಪೇರೆಂಟ್ ಸ್ಟಾಕ್ ನ ಕೋಳಿಮರಿಗಳನ್ನು 100 ಕ್ಕೂ ಅಧಿಕ ದೇಶಗಳಲ್ಲಿನ ಗ್ರಾಹಕರಿಗೆ ಆರ್ಬರ್ ಏಕರ್ಸ್®, ಇಂಡಿಯನ್ ರಿವರ್®, ಮತ್ತು ರಾಸ್® ಬ್ರಾಂಡ್ ಹೆಸರುಗಳಲ್ಲಿ ಪೂರೈಕೆ ಮಾಡುತ್ತಿದ್ದಾರೆ. ಈ ಬ್ರಾಂಡ್ ಗಳು ಉದ್ಯಮದಲ್ಲಿಯೇ ಅತ್ಯಂತ ವಿಶ್ವಸನೀಯ ಹಾಗೂ ಮಾನ್ಯತೆಯನ್ನು ಪಡೆದಿರುವ ಬ್ರಾಂಡ್ ಗಳಾಗಿವೆ ಮತ್ತು ಪ್ರತಿಯೊಂದೂ ಒಂದು ದೊಡ್ಡ ಮತ್ತು ನಿಷ್ಠಾವಂತ ಜಾಗತಿಕ ಗ್ರಾಹಕರ ನೆಲೆಯ ಜೊತೆಗೆ ಒಂದು ಸಾಬೀತಾಗಿರುವ ಯಶಸ್ಸಿನ ದಾಖಲೆಯನ್ನು ಹೊಂದಿದೆ.

Aviagen ಗ್ರಾಹಕರಿಗೆ ತಮ್ಮ ಉತ್ಪನ್ನದ ಆಯ್ಕೆಯಲ್ಲಿ ಹೊಂದಾಣಿಕೆಯನ್ನು ನೀಡುವ ಮತ್ತು ನಿರ್ದಿಷ್ಟ ಮಾರುಕಟ್ಟೆ ಅವಶ್ಯಕತೆಗಳನ್ನು ಪೂರೈಸುವ ಗುರಿಯಿಟ್ಟುಕೊಂಡು ವಿಶೇಷವಾದ ಬ್ರೀಡಿಂಗ್ ಸ್ಟಾಕ್ ಅನ್ನು ಕೂಡ ಒದಗಿಸುತ್ತದೆ. ವಿಶೇಷ ಕೋಳಿಗಳ ಬ್ರಾಂಡ್ ಆಗಿರುವ The Rowan Range® ಆಯ್ಕೆಗೆ ಅನುಗುಣವಾಗಿ ಬದಲಾವಣೆಗೊಳ್ಳುವಂತಹ ಬಣ್ಣವನ್ನು ಹೊಂದಿದ್ದು ಕೆಲವು ಆಯ್ದ ಪ್ರದೇಶಗಳಲ್ಲಿ ಲಭ್ಯವಿರುತ್ತದೆ ಮತ್ತು ನಿಧಾನವಾಗಿ ಬೆಳೆಯುತ್ತಿರುವ, ಮುಕ್ತ-ಶ್ರೇಣಿಯ ಮತ್ತು ಸಾವಯವ ವಿಭಾಗಗಳನ್ನು ಒಳಗೊಂಡಂತೆ ಆಯ್ದ ನೆಲೆ ಅಥವಾ ಉದಯೋನ್ಮುಖ ಮಾರುಕಟ್ಟೆಗಳ ಅಗತ್ಯಗಳನ್ನು ಪೂರೈಸುತ್ತದೆ. ಸ್ಪೆಷಾಲಿಟಿ ಮೇಲ್® ಪೋರ್ಟ್ಫೋಲಿಯೊ ಒಂದು ಗಂಡುಕೋಳಿಗಳ ಶ್ರೇಣಿಯಾಗಿದ್ದು ಹೆಚ್ಚಿನ ಎದೆ ಮಾಂಸ ಇಳುವರಿ, ಎತ್ತರದ ತಾಪಮಾನವು ಇರುವ ಪರಿಸರಕ್ಕೆ ಹೊಂದಿಕೊಳ್ಳುವ ಅಥವಾ ಎಫ್ಸಿಆರ್ ಮತ್ತು ಹ್ಯಾಚ್ಗಳಂತಹ ನೇರ ಉತ್ಪಾದನಾ ಲಕ್ಷಣಗಳ ಜೊತೆಗೆ ಬ್ರಾಯ್ಲರ್ ಬ್ರೀಡಿಂಗ್ ಸ್ಟಾಕ್ನಲ್ಲಿ ನಿರ್ದಿಷ್ಟ ಕಾರ್ಯಕ್ಷಮತೆಯ ಗುಣಲಕ್ಷಣಗಳನ್ನು ಹುಡುಕುವ ಗ್ರಾಹಕರ ಅಗತ್ಯಗಳನ್ನು ಪೂರೈಸುವ ಉದೇಶವನ್ನೊಂದಿದೆ.

Aviagen ನ ಯಶಸ್ವಿ ಹಾಗೂ ಪ್ರತಿಷ್ಠಾಪಿತ ಆನುವಂಶಿಕ ಆಯ್ಕೆ ಕಾರ್ಯಕ್ರಮವು ಅತ್ಯುತ್ತಮವಾದ ಗುಣಮಟ್ಟದ ಆರೈಕೆ ಮತ್ತು ಲಭ್ಯವಿರುವ ಯೋಗಕ್ಷೇಮದ ಮಾನದಂಡಗಳೊಂದಿಗೆ ನಿರಂತರವಾಗಿ ಕೋಳಿಗಳ ದಷ್ಟಪುಷ್ಟತೆ ಹಾಗೂ ಒಟ್ಟಾರೆ ಆರೋಗ್ಯದಲ್ಲಿ ಸತತವಾದ ಸುಧಾರಣೆಗಳನ್ನು ಉತ್ತೇಜಿಸುತ್ತದೆ.

ನಿಮ್ಮ ಪ್ರದೇಶದಲ್ಲಿ ದಿ ರಾಸ್ ಬ್ರಾಂಡ್ ಲಭ್ಯವಿದೆ.


Aviagen and Ross logos


ಮಾಹಿತಿ ಗ್ರಂಥಾಲಯ

ನಮ್ಮ ಮಾಹಿತಿ ಗ್ರಂಥಾಲಯವು Aviagen ಅಭಿವೃದ್ಧಿಪಡಿಸಿದ ವಸ್ತುಗಳನ್ನು ಒಳಗೊಂಡಿದ್ದು, ನಮ್ಮ ಗ್ರಾಹಕರಿಗೆ ಸೌಂಡ್ ಫ್ಲಾಕ್ ಮ್ಯಾನೇಜ್ಮೆಂಟ್ ಕಾರ್ಯಕ್ರಮಗಳ ಮೂಲಕ ಹೆಚ್ಚಿನ ಕಾರ್ಯಕ್ಷಮತೆಯ ಕೋಳಿಗಳನ್ನು ಉತ್ಪಾದಿಸುವಲ್ಲಿ ಅವರ ಕಾರ್ಯಾಚರಣೆಯನ್ನು ಲಾಭದಾಯಕವಾಗಿ ನಿರ್ವಹಿಸಲು ಸಹಾಯ ಮಾಡುತ್ತದೆ.

ಮಾಹಿತಿ ಗ್ರಂಥಾಲಯವನ್ನು ಹುಡುಕಲು, ಶೋಧದ ಮಾಡ್ಯೂಲ್ ಅನ್ನು ಬಳಸಿ. ನಿಮ್ಮ ಶೋಧದ ಫಲಿತಾಂಶಗಳನ್ನು ಕಿರಿದಾಗಿಸಲು ಮಾಡ್ಯೂಲ್ ನಲ್ಲಿ ಕೀವರ್ಡ್ ಶೋಧ ಮತ್ತು ಡ್ರಾಪ್ ಡೌನ್ ಮೆನುವನ್ನು ಬಳಸಿ.

ಮಾಹಿತಿ ಗ್ರಂಥಾಲಯದಲ್ಲಿನ ದಾಖಲೆಗಳು ಇಂಗ್ಲಿಷ್ನಲ್ಲಿ ಜೊತೆಗೆ ಪ್ರಮುಖ ಸಂಪನ್ಮೂಲಗಳೊಂದಿಗೆ ಕನ್ನಡದಲ್ಲಿಯೂ ಲಭ್ಯ ಇವೆ. ಪಿಡಿಎಫ್ ಡೌನ್ಲೋಡ್ ಮಾಡಲು, ಶೀರ್ಷಿಕೆಯ ಮೇಲೆ ಸಲೀಸಾಗಿ ಕ್ಲಿಕ್ ಮಾಡಿ.  ಕನ್ನಡ ಮತ್ತು ಇಂಗ್ಲೀಷಿನಲ್ಲಿರುವ ದಾಖಲೆಗಳನ್ನು ಹುಡುಕಲು ಮಾಹಿತಿ ಗ್ರಂಥಾಲಯದ ಸರ್ಚ್ ಟೂಲ್ ಅನ್ನು ಬಳಸಿ.

Contact Information

ನಿಮಗೆ ಹೆಚ್ಚಿನ ಮಾಹಿತಿ ಅಗತ್ಯವಿದ್ದಲ್ಲಿ, ದಯವಿಟ್ಟು ನಮ್ಮ ಪ್ರಾದೇಶಿಕ ಕಚೇರಿಯನ್ನು ಸಂಪರ್ಕಿಸಿ.

Aviagen India
ದೂರವಾಣಿ: +91 (0)4252 233650
ವಿಳಾಸ: Tamil Nadu
ಇಮೇಲ್: indiasales@aviagen.com
ಮಾಧ್ಯಮ: mediainquiries@aviagen.com

ಮಾಹಿತಿ ಗ್ರಂಥಾಲಯ ಶೋ

ನಿರ್ವಹಣೆಯ ದಾಖಲೆಗಳು

ನಿರ್ವಹಣೆ ಮಾರ್ಗದರ್ಶಿಗಳು, ಕಾರ್ಯನಿರ್ವಹಣೆಯ ಧ್ಯೇಯಗಳು ಮತ್ತು ಪೌಷ್ಟಿಕಾಂಶ ಮಾರ್ಗದರ್ಶಿಗಳು